Blog

Yare ninu sundara cheluve obbale ninthiruve- ಯಾರೇ ನೀನು ಸುಂದರ ಚೆಲುವೆ ಒಬ್ಬಳೇ ನಿಂತಿರುವೆ – Ranadhira- ರಣಧೀರ

0

ಯಾರೇ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ

ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ

ಬಾ ಭೂಮಿಯೇ ನಿನ್ನೊಡಲಲ್ಲಿ ನಾನಾಡುವೆನು

ಬಾ ಪ್ರೇಮಿಯೇ ನಿನ್ನೆದೆಯಲ್ಲಿ ಓಲಾಡುವೆನು

ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯ

ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ

ಮಿಂಚಿದೆ ಮಿಂಚುತ ಮಿನುಗಿದೆ

ಸುಂದರ ಸರೋವರಗಳು ನಿನ್ನ ಎರಡು ಕಣ್ಣು

ಕಣ್ಣಲಿ ವಿರಹವೇ ತುಂಬಿದೆ

ಮಳೆಗಾಲ ಬಂದಾಗ ಮೈಮರೆವ ಓ ಸಿಂಗಾರಿ

ಛಳಿಗಾಲ ಬಂದಾಗ ಮುಸುಕೆಳೆವ ಓ ಚಿನ್ನಾರಿ

ಹೀಗೇಕೆ ಕಾದಿರುವೆ ಮನಸಿನ ಚಿಂತೆ ಹೇಳೆಯ

ವಾರೆವಾ ಈ ಕಾಫಿ ತುಂಬ ಬೊಂಬಾಟಾಗಿದೆ

ಕಾಫಿ ಮಾಡೋ ಹುಡುಗಿ ಕೂಡ ಬೊಂಬಾಟಾಗಿದೆ

ಓ ಮನ್ಮಥ ಪುತ್ರರೆ ನನ್ನ ಹಾಡು ಕೇಳಿದಿರಾ

ಹೌದಮ್ಮ ರತಿ ಪುತ್ರಿ ನಿನ್ನ ಹಾಡು ಕೇಳಿದಿವಿ

ಮನಸಾರೆ ಮೆಚ್ಚಿದಿವಿ ಎಂಜಾಯ್ ಮಾಡಿದಿವಿ

ಎಲ್ಲಾನೂ ನೋಡಿದಿವಿ

ಇಲ್ಲಮ್ಮ ತಾಯಿ, ಮುಚ್ಚೋ ಬಾಯಿ

ಬೊಗಳೆ ದಾಸಯ್ಯ

ನಾನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ

ಲ ಲ ಲ……….

ಈ ಪ್ರೀತಿ ಬರುವ ಮುಂಚೆ ಯಾರಿಗೂ ಹೇಳೋಲ್ಲ

ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

ಎ ಸಂಜು…..

ಏನೇ ಹೇಳು ಸಂಜು ಅವಳ ಹಾಡು ಕೇಳಿ

ಮನಸಿಗೆ ತಿಳಿಯದ ಮುಜುಗರ

ಕಾಡಲ್ಲಿದ್ದರು ಕೂಡ ಹಾಡಿ ನಲಿಯುತಾಳೆ

ಅವಳದು ಎಂತದು ಸಡಗರ

ಇಂಪಾಗಿ ಹಾಡ್ತಿಯಂತ ಹೇಳೋಕೆ ನಾ ಹೋದೆ

ಯಾಕೇಂತ ಗೊತ್ತಿಲ್ಲ ಮಾತಿಲ್ಲದಂತೆ ನಾನಾದೆ

ಹೀಗೇಕೆ ನಾನಾದೆ ನಿನ್ನಾಣೆ ನನಗೇನೋ ಇದು ಹೊಸದು

ಲ ಲ ಲ……

ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳಲ್ಲ

ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ……

You might be interested in …