ಚಿತ್ರ: ಅಂತ (೧೯೮೧)
ಹಾಡು: ಪ್ರೇಮವಿದೆ ಮನದೆ …
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಗೀತಪ್ರಿಯ
ಹಾಡಿದವರು: ಎಸ್.ಜಾನಕಿ
ಪ್ರೇಮವಿದೆ ಮನದೆ ನಗುತ ನಲಿವ ಹೂವಾಗಿ
ಬಂದೆ ಇಲ್ಲಿಗೆ..ನಾ ಸಂಜೆ ಮಲ್ಲಿಗೆ..ನಾ ಸಂಜೆ ಮಲ್ಲಿಗೆ… || ಪ್ರೇಮವಿದೆ ಮನದೆ…||
ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ…
ಕಣ್ಣಲ್ಲಿ ನಿನ್ನ..ನಾ ಕಂಡೆ ನನ್ನ…
ದಿನದಿನವ..ಎಣಿಸಿ.. ಮನದಿ ಗುಣಿಸಿ.. ಬಿಡುವ ಬಯಸಿ…
ಸೋಲು ಈ ದಿನ.. ಗೆಲುವು ಈ ದಿನ… ಎಂಥ ಬಂಧನ… || ಪ್ರೇಮವಿದೆ ಮನದೆ…||
ಹೊಂಗನಸ ಕಂಡೆ… ನನಗಾಗಿ ನೀನು..
ಹೊಂಗನಸ ಕಂಡೆ… ನನಗಾಗಿ ನೀನು..
ಬಗೆಬಗೆಯ ಆಸೆ.. ಮನದೆ ಇರಿಸಿ.. ನೆನಪ ಉಳಿಸಿ..
ದೂರ ಸಾಗದೆ… ದಾಹ ತೀರದೆ.. ತೀರ ಸೇರುವೆ.. || ಪ್ರೇಮವಿದೆ ಮನದೆ…||