ಮಾದೇಶ್ವರ ದಯಬಾರದೇ
ಬರಿದಾದ ಬಾಳಲ್ಲಿ ಬರಬಾರದೇ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯಬಾರದೇ
ಬರಿದಾದ ಬಾಳಲ್ಲಿ ಬರಬಾರದೇ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯಬಾರದೇ
ಹಗಲಲ್ಲೂ ನಿನ್ನದೇ ಧ್ಯಾನ
ಇರುಳಲ್ಲೂ ನಿನ್ನ ಗುಣ ಗಾನ
ಮಹಾದೇವ ನೆನೆಯದೆ ನಿನ್ನ
ನಿಲ್ಲದಯ್ಯ ನನ್ನೀ ಪ್ರಾಣ
ಕನಸಲ್ಲೂ ನೀನೆ ಸ್ವಾಮಿ
ಮನದಲ್ಲೂ ನೀನೆ ಸ್ವಾಮಿ
ಉಸಿರುಸಿರು ನಿನ್ನ ಹೆಸರೇ
ಕಣ್ಣ್ ತೆರೆದು ನೋಡು ಸ್ವಾಮಿ
ಮನೆದೇವ ಮಾದೇಶ್ವರನೇ
ಈ ಮೋರೆಯ ಕೇಳೋ
ಮನೆದೇವ ಮಾದೇಶ್ವರನೇ
ಈ ಮೋರೆಯ ಕೇಳೋ
ನಾ ತಾಳಲಾರೆನೈಯ್ಯಾ ಈ ವೇದನೆ
ನಿಜ ಭಕ್ತ ನನಗೇಕಯ್ಯ ಈ ಶೋಧನೆ…
ಮಾದೇಶ್ವರ ದಯಬಾರದೇ
ಬರಿದಾದ ಬಾಳಲ್ಲಿ ಬರಬಾರದೇ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯಬಾರದೇ
ದೇವಾದಿ ದೇವತೆಗಳನೆ
ಕಾಪಾಡಿದಂತ ಸ್ವಾಮಿ
ನಂಬಿದ ಮನೆಯಲಿ ನಲಿವಾ
ನಿಜ ದೈವ ನೀನೆ ಸ್ವಾಮಿ
ಸಿರಿತನದ ಸಿರಿಯಾ ಕೇಳೇ
ಬಡತನದ ಬೇಗೆಯ ತಾಳೆ
ನಿನ್ನ ಪಾದ ಸೇವೆಗೆಂದೇ
ಮುಡಿಪಾಯ್ತು ನನ್ನೀ ಬಾಳೆ
ನಾ ಮಾಡಿದಂತ ಪಾಪ ಪರಿಹರಿಸು ದೇವಾ..
ನಾ ಮಾಡಿದಂತ ಪಾಪ ಪರಿಹರಿಸು ದೇವಾ..
ಈ ದಾಸನ ಮೇಲೆ ಮುನಿಸೇತಕೆ
ನೀ ಹರಸದ ಬದುಕು ನನಗೇತಕೆ ..
ಮಾದೇಶ್ವರ ದಯಬಾರದೇ
ಬರಿದಾದ ಬಾಳಲ್ಲಿ ಬರಬಾರದೇ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ ದಯಬಾರದೇ
ನಿನ್ನ ಕಾಣಲೆಂದು ಬಂದೆ
ಬಾಳೆಲ್ಲ ನೊಂದು ಬೆಂದೆ
ಮಹಾದೇವ ಎಂಬುದ ಹೊರತು
ಬೇರೇನೂ ಕಾಣೆ ತಂದೆ
ತಂದೆಯು ನೀನೆ ಸ್ವಾಮಿ
ತಾಯಿಯು ನೀನೆ ಸ್ವಾಮಿ
ನಾ ಕಂಡ ಬಂಧು ಬಳಗ
ಎಲ್ಲಾವು ನೀನೆ ಸ್ವಾಮಿ
ನಿನ್ನ ಪಾದ ನಂಬಿ ಬಂದೆ
ದಯ ತೋರೊ ದೇವಾ
ನಿನ್ನ ಪಾದ ನಂಬಿ ಬಂದೆ
ದಯ ತೋರೊ ಮಹಾದೇವ
ನೀನಿಲ್ಲದ ಬಾಳು ಸುಖವೆಲ್ಲಿದೆ
ನೀ ಹರಸದೆ ನನಗೆ ಬಾಳೆಲ್ಲಿದೆ….
ಮಾದೇಶ್ವರ ದಯಬಾರದೇ
ಬರಿದಾದ ಬಾಳಲ್ಲಿ ಬರಬಾರದೇ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾ..ದೇಶ್ವರ ದಯಬಾರದೇ
ಬರಿದಾದ ಬಾಳಲ್ಲಿ ಬರಬಾರದೇ
ನೀನಿಲ್ಲದೆ ನನಗೆ ಬದುಕೆಲ್ಲಿದೆ
ಮಾದೇಶ್ವರ
ದಯ ಬಾರದೇ