ಹೂವಾಡಗಿತ್ತಿ / Huvadagiththi

ರಚನೆ: ಎಂ.ವಿ. ಸೀತಾರಾಮಯ್ಯ (ರಾಘವ) ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ‘ಘಮ ಘಮ ಹೂಗಳು ಬೇಕೇ’ ಎನುತ ಹಾಡುತ ಬರುತಿಹಳು || ೧ || ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ ಹಸುರಿನ ಹೊಸ ಮರುಗ ಹಾಕಿ ಕಟ್ಟಿರುವೆ ಬೇಕೇ ಎನುತ ಹಾಡುತ ಬರುತಿಹಳು || ೨ || […]

0 0

ಆಮೆ / Aame (Tortoise)

ರಚನೆ: ಗಿರಿರಾಜ ಹೊಸಮನಿ ಆಮೆಯೊಂದು ಕೆರೆಯ ದಡದಿ ಮನೆಯ ಮಾಡಿತು ಹಕ್ಕಿಯಂತೆ ಹಾರಬೇಕು ಎಂದು ಬಯಸಿತು. ಹಕ್ಕಿ ಜೊತೆಗೆ ಸಂಗಮಾಡಿ ಆಸೆ ತಿಳಿಸಿತು ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು. ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದುವು ಆಮೆ ಅದಕೆ ಜೋತು ಬೀಳೆ ಹಾರಿ ಹೋದುವು. ದಾರಿಯಲ್ಲಿ ಇದನು […]

0 0

ಬಂದ ಬಂದ ಸಣ್ಣ ತಮ್ಮಣ್ಣ / Banda Banda Sanna Thamanna

ಕಲ್ಯಾಣ ಸೇವೆ ಜೇಬಿನ ಬುಡದಲಿ ಪುಟ್ಟಾಣಿಯ ಪುರಿ ಮೇಲೊಂದಿಷ್ಟು ಗೋಲಿಬಳಪ ಮತ್ತೊಂದಿಷ್ಟು, ಬಂದ ಬಂದ ಸಣ್ಣ ತಮ್ಮಣ್ಣ ಪಠಾಸು ಪೆಟ್ಟು ಒಳಜೇಬಲ್ಲಿ ಕಾಸಿನ ಸಾಲು ಕಳ್ಳ ಜೇಬಲ್ಲಿ ಚೆಂಡು ದಾಂಡು ಎಡಬಲದಲ್ಲಿ ಬಂದ ಬಂದ ಸಂತಮ್ಮಣ್ಣ ಅಮ್ಮನ ಹಾರ ಉಬ್ಬಿದ ಎದೆಗೆ ಬಿದಿರಿನ ಕೊಳಲು ಗೆಜ್ಜೆಯೊಳಗೆ ಹದ್ದಿನರೆಕ್ಕೆ ಎತ್ತಿದ […]

0 0

ಕಪ್ಪೆ ಕರ ಕರ ತುಪ್ಪ ಜಲಿ ಜಲಿ

ಕಪ್ಪೆ ಕರ ಕರ ತುಪ್ಪ ಜಲಿ ಜಲಿ. ಮಾವಿನ ಓಟೆ ಮರದಲ್ಲಿ ಕೋಟೆ ಹದ್ದಿನ ಕೈಯಲ್ಲಿ ಸುದ್ದಿ ಕಳ್ಸಿ ಕಾಗೆ ಕೈಯಲ್ಲಿ ಕಂಕಣ ಕಟ್ಸಿ ನಳ್ಳಿ ಕೈ ಯಲ್ಲಿ ನಗಾರಿ ಹೊಡ್ಸಿ ಸೊಳ್ಳೆ ಕೈಯಲ್ಲಿ ಸೊಬಾನ ಹೇಳ್ಸಿ ಸಣ್ಣಿ ಮದುವೆ ಶನಿವಾರ ಊಟಕ್ಕೆ ಬನ್ನಿ ಬುಧವಾರ

0 0