ಚಿತ್ರ: ಅಪ್ಪು
ಹಾಡಿದವರು: ಉದಿತ್ ನಾರಾಯಣ್, ಚಿತ್ರ
ನಟರು: ಪುನೀತ್ ರಾಜಕುಮಾರ್, ರಕ್ಷಿತ
ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೋ ಬಾರೋ ಕಲ್ಯಾಣ ಮಂಟಪಕೆ ಬಾ
ನಮ್ಮ ಮದುವೆ ಸೆಟ್ಟಾಯಿತೀಗ ಬೇಗ ಬಾ
ನೀನನ್ನ ಬ್ಯೂಟಿ ಏನ್ಜಲು
ಲವ್ವೊಂದೆ ನಮ್ಮ ಬೈಬಲ್ಲು
ಮದುವೆಯ ಬೆಲ್ಲು ಮೊಳಗಿರಲು ಬೆರಳಿಗೆ ರಿಂಗು ತೊಡಿಸಿರಲು
ಮುತ್ತಂಥ ಜೋಡಿ ನಮ್ಮದು
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರು ನಾನು ನೀನು ಇಬ್ಬರು made for each otherಉ
ಲೈಫಲ್ಲಿ ಲವ್ವೇ ಅಮೃತ
ಜೀವನ್ಮೆ ಪ್ಯಾರೆ ಶಾಶ್ವತ
ಹೃದಯದ ಭಾವ ಬೆರೆತಿರಲು ಒಲವಿನ ಜ್ಯೋತಿ ಬೆಳಗಿರಲು
ಪ್ರೇಮಕ್ಕೆ ಮೇರೆ ಇಲ್ಲವೊ
ಪ್ರೀತಿಯೇ ಸೃಷ್ಟಿ ಮೂಲವೋ
ಭಾಷೆ ಬೇರೆಯಾದರು ಜಾತಿಯೇನೆ ಇದ್ದರು ಪ್ರೇಮವು ಒಂದೇ…..