Blog

Muru kasina kudure- Anjada Gandu- ಮೂರು ಕಾಸಿನ ಕುದುರೆ- ಅಂಜದ ಗಂಡು

0

ರಂಭಾ ಬೇಡ ಜಂಬ

ಜಂಬ ಗಿಂಬ ಬೇಡ ರಂಭಾ

ಮೂರು ಕಾಸಿನ ಕುದುರೆ

ಏರಿ ಬಂದಳೋ ಚದುರೆ

ಜಂಬ ಮಾಡಬೇಡಮ್ಮ

ಭೂಮಿ ಮೇಲೆ ನಡೆಯಮ್ಮ

ಆ ಸೂರ್ಯ ಹುಟ್ಟೋದು ಕೋಳಿ ಕೂಗಿನಿಂದಲ್ಲ

ಲೋಕ ದೀಪ ಹಚ್ಚೋದು ಅಜ್ಜಿ ಬೆಂಕಿಯಿಂದಲ್ಲ

ಇದು ಯಾಕೋ ರಂಭೆಗೆ ಇನ್ನು ಗೊತ್ತೇ ಆಗಿಲ್ಲ

ಕಿಲಾಡಿ ಹೆಣ್ಣು ಓ ಚಕೋತಿ ಹಣ್ಣು

ಅಯ್ಯಯ್ಯೋ ಯಾಕೋ ತಿನ್ನೋಕೆ ಮಾತ್ರ ಹುಳಿಯಮ್ಮೋ

ಭಲಾರೆ ಹೆಣ್ಣು ಚಕೋರಿ ಕಣ್ಣು

ಅಯ್ಯಯ್ಯೋ ಬೇಡ ಈ ನಿನ್ನ ನೋಟ ವಿಷವಮ್ಮೋ

ಆರಂಭ ಹೆಣ್ಣಿಂದಲೇ ಆನಂದ ಹೆಣ್ಣಿಂದಲೇ ಅಪಾಯ ಹೆಣ್ಣಿಂದಲೇ ಕೇಳೆ

ವೀರಾಧಿವೀರರೆಲ್ಲ ಮಣ್ಣಾಗಿ ಹೋದದ್ದೆಲ್ಲ ನಿನ್ನಂತ ಹೆಣ್ಣಿಂದಲೇ ಕೇಳೆ

ಜಡೆ ಹಾಕು ಸುಂದರವಾಗಿ ಓ ಕನಕಾಂಗಿ

ಬದಲಾಗು ನೀನು ಹಳ್ಳಿಯ ಮುದ್ದಿನ ಹೆಣ್ಣಾಗಿ

ಮೂರು ಕಾಸಿನ ಕುದುರೆ…..

ಮಣ್ಣಲ್ಲಿ ಚಿನ್ನ ಅಕ್ಕಿಲಿ ಅನ್ನ

ತಂದಿದ್ದು ನಾವು ತಿಂದಿದ್ದು ನೀವು ತಿಳಿಯಮ್ಮೋ

ಈ ನಮ್ಮ ಬೆವರು ಶ್ರೀಮಂತರುಸಿರು

ಅಳೆಯೋಕೆ ನಾವು ಆಳೋಕೆ ನೀವ ಬೇಡಮ್ಮೋ

ಆಳೋನು ಆಳಾಗುವ ಅಳೆಯೋನು ಅರಸಾಗುವ

ಬಡವರ ಕಾಲವು ಬಂತು ಕೇಳೆ

ದುಡಿಯೋನು ಮುನಿದೆದ್ದರೆ ಉಳುವವನು ಸಿಡಿದೆದ್ದರೆ

ಉಳಿಗಾಲ ಇಲ್ಲವೇ ನಿಮಗೆ ನಾಳೆ

ದಯ ತೋರು ಮಾನವಳಾಗಿ ಬಡವರಿಗಾಗಿ

ಬದಲಾಗು ನೀನು ಕನ್ನಡ ಮಣ್ಣಿನ ಹೆಣ್ಣಾಗಿ

ಮೂರು ಕಾಸಿನ ಕುದುರೆ……

You might be interested in …