ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ..
ತೀರದಲಿ ಮೈಮರೆತೇ ಸೆಳೆಯುವ ಅಲೆಯಲಿ ಸಿಹಿಯಾಗಿ
ನೂಕುತಿದೆ ತಂಗಾಳಿ ಬಯಕೆಯ ಬಲೆಯಲಿ ಬಿಗಿಯಾಗಿ
ಮನಸಿದು ಈಗ ಸಿಹಿ ಮಧುಶಾಲೆ… ನೆನಪಿನ ದಾಳಿಗೆ ಸಿಲುಕಿದ ಮೇಲೆ
ಪ್ರತಿಸಲ ಒಲಿಯುವೆ ಬೆರಗಾಗಿ…
ಕಾಡದೆಯೇ ಹೇಗಿರಲಿ… ಹೃದಯವು ಕಳೆದಿದೆ ನಿನಗಾಗಿ…
ಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ..
ಮರಳಿನಲಿ ಬರೆಯದಿರೋ…ಅರೆ ಮರುಳಲಿ ಜೊತೆ ಜೊತೆ ಹೆಸರನು…
ಅರಿವಿರದ… ಅಲೆಗಳು ತಾ ಅಳಿಸಿದರೇ ಬೇಜಾರು
ಎದುರಿನಲಿ ಮಿನುಗುತಿರೆ ಪ್ರತಿಫಲಿಸುತ ಒಲವನು ನಯನವು
ಗುರುತೆ ನಿನ್ನಾ ಮರೆತಿರುವೇ… ತಿಳಿಸಿಬಿಡು ನಾ ಯಾರು?
ಸಹಜ ಸಡಗರವಿದೆ ಮಧುರ ಮುಜುಗರವಿದೆ
ನಿಲ್ಲಾಲಾರೆ ಅಲ್ಲೂ ಇನ್ನೂ ಮರೆಯಾಗಿ
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ.
ಕಾಡದೆಯೇ ಹೇಗಿರಲಿ ಜೀವದಲಿ.. ಏನೇನೋ…
ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ
ಜೀವದಲಿ… ಏನೇನೋ… ಹಸಿ-ಬಿಸಿ ಕನಸಿವೆ ನವಿರಾಗಿ.
Blog