ದ್ವಾಪರ ದಾಟುತ ನನ್ನನೇ ನೋಡಲು
ನನ್ನನೇ ಸೇರಲು ಬಂದ ರಾಧಿಕೆ
ಹಾಡಲಿ ಹಾಡಲು ಮಾತಲಿ ಹೇಳಲು
ಸಾಧ್ಯವೇ ಇಲ್ಲದ ರಾಗ ಮಾಲಿಕೆ
ಸಖಿ ಸಖಿ ನನ್ನ ರೂಪಸಿ
ಸಖಿ ಸಖಿ ನಿನ್ನ ಮೋಹಿಸಿ
ನೀನೇ ನನ್ನ ಪ್ರೇಯಸಿ
ಜೇನ ದನಿಯೋಳೆ ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ
ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ
ಬೇರೆ ದಾರೀನು ಇಲ್ಲ ನನಗಿನ್ನು
ನೀನು ಸಿಕ್ಕಾಗಿದೆ ನಾನು ಹುಡುಕಿದ್ದು
ನನ್ನ ನಿಲ್ದಾಣ ನೀನೆ ಇನ್ನೇನಿದೆ
ನಿಹಾರಿಕಾ ಆಕರ್ಶಿಕ ಅನಾಮಿಕ ಹೆಸರೇನೆ
ವೆರೋನಿಕ ಶಿಫಾಲಿಕಾ ಇವಾಂಶಿಕ ನೀನೇನೇ
ಅರಳದ ಸುಮಗಳ ಅರಳಿಸುವವಳು
ಕುಸುಮಗಳಂತ ಬೆರಳು ಚೆಂಮಲ್ಲಿಗೆಯೆಂತಿವೆ ಬೆರಳು
ಗಿಳಿಗಳ ಬಳಗಕೆ ಸರಿಗಮ ಕಲಿಸುವ
ಇನಿಧನಿ ಜಿನುಗೂ ಕೊರಳು
ಬಲು ವಿಸ್ಮಯ ನಿನ್ನ ಕೊರಳು
ಸೌಂದರ್ಯದಲ್ಲಿ ಗಾಂಭೀರ್ಯವಂತೆ
ಆಂತರ್ಯದಲ್ಲಿ ಔದಾರ್ಯವಂತೆ
ನೀನೇ ನನ್ನ ಪ್ರೇಯಸಿ
ಪಾದ ಪದ್ಯಾನ ಬರೆದ ಹಾಗಿರುವ
ಹೆಜ್ಜೆಯಾ ಮುದ್ರೆಯೂ
ನಿನ್ನ ನಡೆ ಕಂಡು ಹಿಂದೆ ಬರಬಹುದು
ತುಂಗೆಯೂ ಭದ್ರೆಯೂ
ನಾನು ಶ್ರೀಕೃಷ್ಣ ನೀನೇ ನನ ಭಾಮೆ
ಮೂಡಿದೆ ಪ್ರೀತಿಯು ಎಷ್ಟು ಜನ್ಮಗಳ
ದಾಟಿ ಬಂದಾಯ್ತು ಈ ಕ್ಷಣ ಸಾಕ್ಷಿಯು
ಲೀಲಾವತಿ ಶರಾವತಿ ನೀಲಾವತಿ ಹೆಸರೇನೆ
ಗಂಗಾವತಿ ತುಂಗಾವತಿ ನೇತ್ರಾವತಿ ನೀನೇನೆ
ನೀ ನಕ್ಕರೆ ಸಕ್ಕರೆ ಅರರೆರೆ ಎಂದೂ
ಬ್ರಹ್ಮನಿಗೂನು ಬೆರಗು ನೀನೆಂದರೆ
ಬೆರಗಿಗೂ ಬೆರಗು ಬರೆದರೆ ಮುಗಿಯದು
ಪದದಲ್ಲಿ ಸಿಗದು ರತಿಯರಿಗಿಂತ ಸೊಬಗು
ಮೈ ಮಾಟವೆ ಮೋಹಕ ಸೊಬಗು
ಲಾವಣ್ಯ ನೋಡಿ ನಾ ಧನ್ಯನಾದೆ
ತಾರುಣ್ಯ ಮೋಡಿ ಹೀಗಾಗಿ ಹೋದೆ
ನೀನೇ ನನ್ನ ಪ್ರೇಯಸಿ
ಜೇನ ದನಿಯೋಳೆ ಮೀನ ಕಣ್ಣೋಳೆ
ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ
ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ
ಬೇರೆ ದಾರೀನು ಇಲ್ಲ ನನಗಿನ್ನು
ನೀನು ಸಿಕ್ಕಾಗಿದೆ ನಾನು ಹುಡುಕಿದ್ದು
ನನ್ನ ನಿಲ್ದಾಣ ನೀನೆ ಇನ್ನೇನಿದೆ