Blog

ತಬ್ಬಲಿಗೆ ಈ ತಬ್ಬಲಿಯ / Tabbalige E Tabbaliya from Karpurada Gombe

0

ಸಿನಿಮಾ : ಕರ್ಪೂರದ ಗೊಂಬೆ

ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ?

ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ?
ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ?

ಮಳೆಯಿದೆ
ಬಿಸಿಲಿದೆ
ಹಕ್ಕಿಗೊಂದು ಗೂಡಿದೆ
ಅಲ್ಲೂ ಒಂದು ಹಾಡಿದೆ
ಇರುಳಿದೆ
ಭಯವಿದೆ
ತಂಗಾಳಿಯೂ ಬೀಸದೆ
ಒಳ್ಳೇ ದಿನ ಬಾರದೇ
ತಾಳಬೇಕಮ್ಮಾ
ನಾವು ಬಾಳಬೇಕಮ್ಮಾ
ಅಳುವ ತಬ್ಬಲಿಯಾ
ನಾವು ನಗಿಸಬೇಕಮ್ಮಾ

ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ?
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ?

ಏನಿದೆ
ಇನ್ನೇನಿದೆ
ನಿನ್ನ ಬಿಟ್ಟು ಏನಿದೆ
ನೀನೇ ಬದುಕಾಗಿದೆ
ಕರುಳಿನ
ಗೆಳತಿಯೇ
ತಾಯಿಲ್ಲದ ತವರಿಗೆ
ಅಕ್ಕ ತಾನೇ ದೀವಿಗೆ
ಕಣ್ಣು ನೀನಮ್ಮಾ
ರೆಪ್ಪೆ ನಾನಮ್ಮಾ
ನಿನ್ನ ಕಣ್ಣೊರೆಸೋ
ತಾಯಿ ನಾನಮ್ಮಾ

ತಬ್ಬಲಿಗೆ ಈ ತಬ್ಬಲಿಯ
ತವರಿದೆ ಯಾಕಳುವೆಯೇ?
ತಬ್ಬಲಿಗೆ ಈ ತಬ್ಬಲಿಯ
ನಗುವಿದೆ ಯಾಕಳುವೆಯೇ?

ಜೋ ಜೋ ಜೋಜೋ
ಲಾಲಿ ಜೋ ಜೋ ಜೋಜೋ
ಜೋ ಜೋ ಜೋಜೋ
ಲಾಲಿ ಜೋ ಜೋ ಜೋಜೋ

You might be interested in …