Blog

ಬಂದ ಬಂದ ಸಣ್ಣ ತಮ್ಮಣ್ಣ / Banda Banda Sanna Thamanna

0

ಕಲ್ಯಾಣ ಸೇವೆ ಜೇಬಿನ ಬುಡದಲಿ

ಪುಟ್ಟಾಣಿಯ ಪುರಿ ಮೇಲೊಂದಿಷ್ಟು

ಗೋಲಿಬಳಪ ಮತ್ತೊಂದಿಷ್ಟು,

ಬಂದ ಬಂದ ಸಣ್ಣ ತಮ್ಮಣ್ಣ

ಪಠಾಸು ಪೆಟ್ಟು ಒಳಜೇಬಲ್ಲಿ

ಕಾಸಿನ ಸಾಲು ಕಳ್ಳ ಜೇಬಲ್ಲಿ

ಚೆಂಡು ದಾಂಡು

ಎಡಬಲದಲ್ಲಿ ಬಂದ ಬಂದ ಸಂತಮ್ಮಣ್ಣ

ಅಮ್ಮನ ಹಾರ ಉಬ್ಬಿದ ಎದೆಗೆ

ಬಿದಿರಿನ ಕೊಳಲು ಗೆಜ್ಜೆಯೊಳಗೆ

ಹದ್ದಿನರೆಕ್ಕೆ ಎತ್ತಿದ ತಲೆಗೆ

ಬಂದ ಬಂದ ಸಣ್ಣ ತಮ್ಮಣ್ಣ

ಕತ್ತುರಿ ಚಂದ್ರ ಹಣೆಯಲ್ಲಿಹುದು

ಸಂಜೆಯ ಶುಕ್ರ ಕಣ್ಣಲ್ಲಿಹುದು

ಬೆಳು ಬೆಳದಿಂಗಳು ಗಲ್ಲದ ಮೇಲೆ

ಬಂದ ಬಂದ ಸಂತಮ್ಮಣ್ಣ

ಮೊದಲನೆ ಮಾತು ಹೂವಿನ ಮುತ್ತು

ಮರು ಮಾತಾಡಲು ಸಿಡಿಲು ಗುಡುಗು

ಮೂರನೆ ಬಾರಿಗೆ ಆನೆಯ ಕಲ್ಮಳೆ

ಬಂದ ಬಂದ ಸಣ್ಣ ತಮ್ಮಣ್ಣ

ಬಾರೋ, ಬಾರೋ, ಸಿಡಿಲಿನ ಮರಿಯೆ

ಬಾರೋ, ನಾಡಿನ ಸುಂಟರಗಾಳಿ!

ತೋರೋ ಸಿರಿಮೊಗ, ತುಂಟರ ಗುರು

ಬಂದ, ಬಂದ, ಸಂತಮ್ಮಣ್ಣ

You might be interested in …