ರಚನೆ: ಗಿರಿರಾಜ ಹೊಸಮನಿ
ಆಮೆಯೊಂದು ಕೆರೆಯ ದಡದಿ ಮನೆಯ ಮಾಡಿತು
ಹಕ್ಕಿಯಂತೆ ಹಾರಬೇಕು ಎಂದು ಬಯಸಿತು.
ಹಕ್ಕಿ ಜೊತೆಗೆ ಸಂಗಮಾಡಿ ಆಸೆ ತಿಳಿಸಿತು
ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು.
ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದುವು
ಆಮೆ ಅದಕೆ ಜೋತು ಬೀಳೆ ಹಾರಿ ಹೋದುವು.
ದಾರಿಯಲ್ಲಿ ಇದನು ಕಂಡು ಜನರು ನಕ್ಕರು
ಮಾನ ಹೋಯಿತೆಂದು ಆಮೆ ಮನದಿ ಕುದಿಯಿತು.
ನಕ್ಕ ಜನರ ಬಯ್ಯಲೆಂದು ಬಾಯಿ ತೆರೆಯಿತು
ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋಯಿತು.