ಚಿತ್ರ : ಮುಂಗಾರು ಮಳೆ ೨
ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಜಯಂತ್ ಕೈಕಿಣಿ
ಹಿನ್ನೆಲೆ ಗಾಯಕರು: ಅರ್ಮಾನ್ ಮಲಿಕ್
ನಟರು: ಗಣೇಶ್, ನೇಹಾ ಶೆಟ್ಟಿ
ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ
ಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
ಕನಸಿನ ಕುಲುಮೆಗೆ ಉಸಿರನು ಊದುತ
ಕಿಡಿ ಹಾರುವುದು ಇನ್ನು ಖಚಿತ x2
ಕಣ್ಣಲೇ ಇದೆ ಎಲ್ಲ ಕಾಗದ ನೀನೆ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ ನೀನೆ ಜ್ಞಾಪಕ ನೀನೆ ಔಷದಿ ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೇ ಅನ್ಯಾಯ
ನನ್ನಯ ನಡೆ ನುಡಿ ನಿನ್ನನು ಅರಸುತ
ಬದಲಾಗುವುದು ಇನ್ನು ಖಚಿತ
ಸರಿಯಾಗಿ……
ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದ ರಂಗಸಜ್ಜಿಕೆ
ನಿನ್ನ ನೋಡದ ನನ್ನ ಜೀವನ ಸುದ್ದಿಯಿಲ್ಲದ ಸುದ್ಧಿಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ ನೆನಪಲಿ ಇರುಳನು ಕಳೆಯುತ
ಬೆಳಗಾಗುವುದು ಇನ್ನು ಖಚಿತ
ಸರಿಯಾಗಿ……