ಕರ್ಮದ ಕಲ್ಲನೂ
ಎಡವಿದ ಮನುಜನ..ಬೆರಳಿನ ಗಾಯವೂ…
ಮಾಯದೂ..
ಹಗೆಯಲಿ ಕೋವಿಗೆ
ತಲೆ ಕೊಡೋ ಮರುಳರಾ..ಗುಡಿಯಲಿ ದೈವವೂ..
ಕಾಯದೂ..
ಕತ್ತಲನು ಮಣಿಸೋಕೆ ಹಚ್ಚಿಯಿಟ್ಟ ದೀಪ
ಊರೂರನ್ನೇ ಸುಡುವಂಥ ಜ್ವಾಲೆ ಆಯಿತೇನೋ
ಓ..ಗರ್ಭದಲ್ಲೇ ಆದ ಗಾಯ ಹಣೆಬರಹ
ಬದುಕಿಡಿ ಮದ್ದು ಹುಡುಕಿ ಅಲೆದಾಡುವೇ..
ಯಾರ ಜೊತೆ ಅರಿಯದೆ ನಿನ್ನ ಕಲಹ
ನಿನ್ನನ್ನೇ ನೀನು ಹುಡುಕಿ ಕಳೆದೋಗುವೇ..
ನುಂಗಿಕೊಂಡರುನೂ
ಮಾಡೋ ಪಾಪನೆಲ್ಲಾ ಗಂಗೆ..ಬಿಟ್ಟು ಹೋಗುತ್ತಾಳೆ
ಪಶ್ಚತಾಪ ನಂಗೆ ನಿಂಗೆ…ಯೇ..
ದರ್ಪದಲಿ ಮೆರೆವಾಗ ತೊಟ್ಟ ಹೂವಮಾಲೆ
ನಾಳೆಗೆ..ಹೂವು ಉದುರಿ ಕುಣಿಕೆ ಆಗದೇನು…