ಚಿತ್ರ : ಶೃಂಗಾರ ಕಾವ್ಯ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ
ಹಿನ್ನೆಲೆ ಗಾಯನ: ಎಸ್ ಪಿ ಬಿ , ಚಿತ್ರ
ನಟರು: ರಘುವೀರ್, ಸಿಂಧು
ಓಹೊಹೊ ಓಹೊ … ಅಹಹಾ ಹಹ
ಓ ಮೇಘವೆ ಮೇಘವೆ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ
ಓ ಮೇಘವೆ ಮೇಘವೆ ಹೋಗಿ ಬಾ
ಈ ಓಲೆಯ ಅವನಿಗೆ ನೀಡಿ ಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ
ಓ ಮೇಘವೆ……..
ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ ಓದುವೆಯ
ಮುಗಿಲ ಬಾನಗಳ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ ಓದುವೆಯ
ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ
ಇದು ಓದೋ ಓಲೆಯಲ್ಲ ಬರೆದುಕೊ
ನನ್ನ ಜೀವ ನಿನ್ನದೆ ಎಂದುಕೋ
ನಿನ್ನ ಮನದ ಮನೆಗೆ ತಂದುಕೋ
ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ
ಮುಗಿಲೆ ಬೆಳ್ಮುಗಿಲೆ ತಂಬೆಲರೆ ತಳಿರೆ
ಹಗಲೇ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ವನವೇ ಕಾನನವೇ ಹೂಬನವೇ ಹಸಿರೇ
ಗಿರಿಯೇ ನೀರ್ಝರಿಯೇ ನಮ್ಮೊಳಗೇ ನಿನ್ನುಸಿರೇ
ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ
ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ
ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೆ ವಂದನೆ
ಸಂಧಾನದ ಪಾತ್ರಕೆ ವಂದನೆ